ಹಾವೇರಿ ಸೇರಿದಂತೆ ಉತ್ತರಕರ್ನಾಟಕದಲ್ಲಿ ಗಣೇಶ ಚತುರ್ಥಿಯ ನಂತರ ಜೋಕುಮಾರಸ್ವಾಮಿ ಆಚರಣೆ ಕಾಣಿಸಿಕೊಳ್ಳುತ್ತೆ. ಜೋಕುಮಾರನ ಮಣ್ಣಿನ ಮೂರ್ತಿಯನ್ನ ಬುಟ್ಟೆಯಲ್ಲಿಟ್ಟುಕೊಳ್ಳುವ ಅಂಬಿಗ ಸಮುದಾಯದ ಮಹಿಳೆಯರು ಜೋಕುಮಾರನ ಹೊತ್ತು ಮನೆಮನೆಗೆ ತೆರಳುತ್ತಾರೆ. ಭಕ್ತರಿಗೆ ಜೋಕುಮಾರನ ಕಾಡಿಗೆ ಅಂಬಲಿ ನೀಡುತ್ತಾರೆ. ಭಕ್ತರು ಮಹಿಳೆಯರಿಗೆ ಭತ್ತ,ಅಕ್ಕಿ,ಜೋಳ ಸೇರಿದಂತೆ ವಿವಿಧ ಧಾನ್ಯಗಳನ್ನ ನೀಡುತ್ತಾರೆ.