ನಗರದ ಜಿಲ್ಲಾಧಿಕಾರಿಆವರಣದಲ್ಲಿರುವ ಜಿಲ್ಲಾ ಲೋಕ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಹಾವು ಪತ್ತೆಯಾದ ಘಟನೆ ಬುಧವಾರ ಬೆಳಿಗ್ಗೆ 10ಗಂಟೆಗೆ ನಡೆದಿದೆ.ಕಚೇರಿಯಲ್ಲಿದ್ದ ಪಠ್ಯಪುಸ್ತಕಗಳ ನಡುವೆ ಹಾವು ಕಾಣಿಸಿಕೊಂಡಿದ್ದು, ಇದರಿಂದ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಭೀತಿ ಉಂಟಾಯಿತು. ಘಟನೆ ತಿಳಿಯುತ್ತಿದ್ದಂತೆ ಉರಗಪ್ರೇಮಿ ಸಮೀರ್ ಸೇಟ್ ಸ್ಥಳಕ್ಕೆ ಧಾವಿಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಣೆ ಮಾಡಿದ್ದಾರೆ. ಹಾವು ಕಂಡು ಬಂದರೆ ಅವುಗಳನ್ನು ರಕ್ಷಿಸಿ ಎಂದುಸಮೀರ್ ಸೇಟ್ ಮನವಿ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಸರ್ಕಾರಿ ಕಚೇರಿಯೊಳಗೆ ಇಂತಹ ಘಟನೆ ಸಂಭವಿಸಿರುವುದು ಸುರಕ್ಷತಾ ಕ್ರಮಗಳ ಅಭಾವ ಹಾಗೂ ಸ್ವಚ್ಛತಾ ನಿರ್ಲಕ್ಷ್ಯಕ್ಕೆ ಸಂಕೇತವೆಂದು ಸಾರ್ವಜನಿಕರು ಅಭಿಪ್ರಾ