ಹಾವೇರಿ ನಗರದ ಸಮೀಪ ಇರುವ ಹೆಗ್ಗೇರಿ ಕೆರೆ ಜಿಲ್ಲೆಯಲ್ಲಿಯೇ ದೊಡ್ಡಕೆರೆಗಳಲ್ಲಿ ಒಂದು. ಈ ಕೆರೆ ಹೂಳು ತುಂಬಿದ್ದು ವೈಜ್ಞಾನಿಕ ರೀತಿಯಲ್ಲಿ ಹೂಳು ತಗೆಯುವಂತೆ ರೈತರು ಒತ್ತಾಯಿಸಿದ್ದಾರೆ. ಕೆರೆ ಹೂಳು ತಗೆಯದ ಕಾರಣ ಹೆಚ್ಚುನೀರು ಸಂಗ್ರಹವಾಗಿಲ್ಲ. ಕೆರೆ ಹೂಳು ತಗೆದರೆ ಅಧಿಕ ಪ್ರಮಾಣದ ನೀರು ಕೆರೆಯಲ್ಲಿ ನಿಲ್ಲುತ್ತದೆ. ಇದರಿಂದ ಕೆರೆ ಸುತ್ತಮುತ್ತ ಇರುವ ಗ್ರಾಮಗಳ ಅಂತರ್ಜಲಮಟ್ಟ ಸುಧಾರಿಸಲಿದೆ ಎಂದು ರೈತರು ಅಭಿಪ್ರಾಯಪಟ್ಟರು.