ಬಳ್ಳಾರಿ:ಮಹಾ ನಗರ ಪಾಲಿಕೆಗೆ ನೂತನ ಆಯುಕ್ತರಾಗಿ ಪಿ.ಎಸ್.ಮಂಜುನಾಥ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಅವರು ಮಂಗಳವಾರ ಬೆಳಿಗ್ಗೆ 10ಗಂಟೆಗೆ ಕಾರ್ಯಭಾರವಹಿಸಿಕೊಂಡಿದ್ದಾರೆ. ಈವರೆಗೆ ಅವರು ಬಳ್ಳಾರಿ ಜಿಲ್ಲಾ ಖನಿಜ ನಿಧಿಯ ಅನುಷ್ಠಾನದ ವಿಶೇಷ ಅಧಿಕಾರಿಯಾಗಿದ್ದರು. ಇದಕ್ಕೂ ಮೊದಲು ಅವರು ಬಳ್ಳಾರಿಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈವರೆಗೆ ಕಾರ್ಯನಿರ್ವಹಿಸುತ್ತಿದ್ದ ಕಲೀಲಸಾಬ್ ಅವರನ್ನು ಕಳೆದ ಕೆಲ ತಿಂಗಳ ಹಿಂದೆ ವರ್ಗ ಮಾಡಿತ್ತು ಅವರ ಸ್ಥಾನಕ್ಕೆ ಬಂದಿದ್ದವರನ್ನು ಅಧಿಕಾರವಹಿಸಿಕೊಳ್ಳದಂತೆ ತಡೆದ ಕಾರಣ ಕಲೀಲ್ ಸಬ್ ಅವರು ಈವರೆಗೆ ಮುಂದುವರೆದಿದ್ದರು. ಬುಡಾ ಆಯುಕ್ತರಾಗಿಯೂ ಅವರು ಪ್ರಭಾರ ವಹಿಸಿಕೊಂಡಿದ್ದರು.