ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಎರಡನೇ ದಿನದ ಗಣೇಶ ವಿಸರ್ಜನಾ ಮೆರವಣಿಗೆ ಸಡಗರ ಸಂಭ್ರಮದಿAದ ಅಗಸ್ಟ ೨೮ ರಾತ್ರಿ ೧೧ ಗಂಟೆಗೆ ನಡೆಯಿತು. ರಾಜ್ಯ ಸರಕಾರ ಡಿಜೆಯನ್ನು ನಿಷೇಧ ಮಾಡಿದ್ದರಿಂದ ಡೊಳ್ಳು ಕುಣಿತ, ಹಲಗಿ ಮೇಳಕ್ಕೆ ಯುವಕರು ಕುಣಿದು ಕುಪ್ಪಳಿಸುತ್ತಾ, ಸಿಡಿಮದ್ದುಗಳನ್ನು ಹಚ್ಚಿ ಸಂಭ್ರಮಿಸುತ್ತಾ ಎರಡನೇ ದಿನದ ಗಣೇಶ ವಿಸರ್ಜನಾ ಮೆರವಣಿಗೆ ಸಂಭ್ರಮದಿAದ ನಡೆಯಿತು. ನಗರದಲ್ಲಿ ಯಾವುದೇ ರೀತಿಯಅಹಿತಕರ ಘಟನೆಗಳು ನಡೆಯದಂತೆ ಡಿವಾಯ್‌ಎಸ್‌ಪಿ ವಿಶ್ವನಾಥರಾವ್ ಕುಲಕರ್ಣಿ, ಸಿಪಿಐ ಸುನೀಲ ಸವದಿ, ಪಿಎಸ್‌ಐ ಮಂಜುನಾಥ ಪಾಟೀಲ, ಮಲ್ಲಿಕಾರ್ಜುನ ಸತ್ತಿಗೌಡರ ನೇತೃತ್ವದಲ್ಲಿ ಬಿಗಿ ಬಂದೋ ಬಸ್ತನ್ನು ವ್ಯವಸ್ಥೆಯನ್ನು ಮಾಡಿದರು.