ಯಲ್ಲಾಪುರ : ಪಟ್ಟಣದಲ್ಲಿ ಗಣೇಶ ಹಬ್ಬದ ಮುನ್ನಾದಿನ ಗಣೇಶ ಮಂಟಪದ ಅಲಂಕಾರಕ ವಸ್ತು ಹೂವು ಹಣ್ಣುಗಳ ಮಾರಾಟ ಭರ್ಜರಿಯಾಗಿ ನಡೆದಿದ್ದು ಅಲಂಕೃತ ಸಾಮಗ್ರಿಗಳನ್ನು ಗ್ರಾಹಕರು ಅಂಗಡಿಗಳಲ್ಲಿ ಖರೀದಿಸಲು ಮುಗಿಬಿದ್ದಿರುವ ದೃಶ್ಯ ಹಾಗೂ ಇದರಿಂದಾಗಿವಾಹನ ಸಂಚಾರ ದಟ್ಟನೆ ಹೆಚ್ಚಾಗಿ ಸಾರ್ವಜನಿಕರು ಓಡಾಡಲು ಹಾರ ಸಾಹಸ ಪಡುತ್ತಿರುವ ದೃಶ್ಯ ಮಂಗಳವಾರ ಸಂಜೆ ಕಂಡು ಬಂತು.ಪಟ್ಟಣ ದ ಬಸ್ ನಿಲ್ದಾಣ ರಸ್ತೆಯ ಬದಿಯ ಅಂಗಡಿಯಲ್ಲಿ ಗಣೇಶ ಮಂಟಪ ತಯಾರಿಗೆ ವಿವಿಧ ಅಲಂಕೃತ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಹೆಚ್ಚಾಗಿತ್ತು.ನಾನಾ ತರದ ಹಣ್ಣುಗಳು, ಸೇವಂತಿಗೆ, ಮಲ್ಲಿಗೆ ಇನ್ನಿತರ ಹೂವುಗಳ ವ್ಯಾಪಾರ ಜೋರಾಗಿತ್ತು. ಬುಧವಾರ ಗಣೇಶ ಚತುರ್ಥಿ ಇರುವುದರಿಂದ ಗ್ರಾಮೀಣಭಾಗದ ಜನರ ಸಂಖ್ಯೆ ಹೆಚ್ಚಾಗಿತ್ತು.