ಶಿರಾ ಸರ್ಕಾರಿ ಬಸ್ ನಿಲ್ದಾಣದ ಅವ್ಯವಸ್ಥೆಯಿಂದಾಗಿ ಮಳೆ ಬಿದ್ದ ಕೂಡಲೇ ಸಂಪೂರ್ಣ ಪ್ರದೇಶ ಕೇಸರುಗದ್ದೆಯಂತಾಗುತ್ತಿದೆ. ಪ್ರಯಾಣಿಕರು ಕೇಸರಿನಲ್ಲಿ ನಡೆಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚಾರ ಮಾಡುವ ಈ ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆಗಳ ಕೊರತೆ ಕಂಡುಬಂದಿದ್ದು, ಪ್ರಯಾಣಿಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ತಕ್ಷಣವೇ ಬಸ್ ನಿಲ್ದಾಣಕ್ಕೆ ಅಗತ್ಯ ಸೌಕರ್ಯ ಒದಗಿಸಬೇಕು” ಎಂದು ಪ್ರಯಾಣಿಕರು ಗುರುವಾರ ಸಂಜೆ 6 ಗಂಟೆಯಲ್ಲಿ ಒತ್ತಾಯಿಸಿದ್ದಾರೆ.