ಸಕಲೇಶಪುರ :- ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಹಳ್ಳಿಯ ಗೌರಮ್ಮ ಹರೀಶ್ ಅವರ ಮನೆಗೆ ನೆನ್ನೆ ರಾತ್ರಿ ಕಾಡನೆ ದಾಳಿ ಮಾಡಿ ಮನೆಯ ಹಂಚಿನ ಗಳಾಗಳನ್ನು ಎಳೆದು ಹಂಚು ಗಳಿಗೆ ಹಾನಿ ಉಂಟುಮಾಡಿದೆ. ಇದರಿಂದ ಮನೆಯವರು ರಾತ್ರಿ ಪೂರ್ತಿ ನಿದ್ದೆಮಾಡದೆ ಹೆದರಿಕೆಯಿಂದ ಮನೆಯಲ್ಲಿ ಕೂರುವಂತಹ ಪ್ರಸಂಗ ನಡೆದಿದೆ. ಪ್ರತಿನಿತ್ಯ ಕಾಡಾನೆಗಳ ಹಾವಳಿಗೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಇ ಟಿ ಎಸ್ ಸಿಬ್ಬಂದಿಗಳಿಗೆ ಸರಿಯಾದ ವಾಹನ ಹಾಗೂ ಪಟಾಕಿಗಳನ್ನು ಕೊಡದೆ ಕಾಡಾನೆಗಳನ್ನು ಕಾಡಿನತ್ತ ಓಡಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಇದರ ಬಗ್ಗೆ ಅರಣ್ಯ ಅಧಿಕಾರಿಗಳು ಕ್ರಮ ಕೊಳ್ಳಬೇಕೆಂದು ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಅಧ್ಯಕ್ಷರಾದ ದರ್ಶನ್ ಆಗ್ರಹಿಸಿದ್ದಾರೆ