ಆಗಸ್ಟ್ 23 ಮಧ್ಯಾಹ್ನ 3:00 ಗಂಟೆಗೆ ದೀಪಿಕಾ ದಾಸ್ ಬಗ್ಗೆ ಯಶ್ ತಾಯಿ ಪುಷ್ಪಮ್ಮ ಮಾತಾಡಿದ ಸಂದರ್ಶನ ವೈರಲ್ ಆಗಿದೆ. ಇದರಲ್ಲಿ ನಿರೂಪಕಿ ಯಶ್ ಅವರ ತಾಯಿಗೆ ಮುಂದಿನ ಸಿನಿಮಾಗೆ ದೀಪಿಕಾ ದಾಸ್ ಅವರನ್ನು ಹೀರೋಯಿನ್ ಆಗಿ ಆಯ್ಕೆ ಮಾಡಿಕೊಳ್ಳುತ್ತೀರಾ ಅಂತ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಕಾರವಾಗಿ ಉತ್ತರಿಸಿದ ಯಶ್ ತಾಯಿ ದೀಪಿಕಾ ದಾಸ್ ದೊಡ್ಡ ಹೀರೋಯಿನ್ನ ಅವಳನ್ನು ಸಿನಿಮಾ ಗೆ ಹಾಕಿಕೊಳ್ಳೋಕೆ? ಅವರ ಫ್ಯಾಮಿಲಿಗೂ ನಮ್ ಫ್ಯಾಮಿಲಿಗೂ ಆಗಲ್ಲ ಅಂತ ಹೇಳಿದ್ದಾರೆ. ಸದ್ಯ ಈ ವಿಚಾರ ಎಲ್ಲ ಕಡೆ ಚರ್ಚೆ ಆಗ್ತಾ ಇದ್ದು ಪುಷ್ಪ ಹೇಳಿಕೆಗೆ ಬಾರಿ ಟೀಕೆ ವ್ಯಕ್ತ ಆಗಿದೆ. ದೀಪಿಕಾ ದಾಸ್ ಕೂಡ ಪೋಸ್ಟ್ ಮಾಡಿ ನನ್ನ ಬಗ್ಗೆ ಮಾತನಾಡಲು ಯಾರಿಗೂ ಯೋಗ್ಯತೆ ಇಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ.