ಮಾದಕ ವಸ್ತುಗಳು ಯುವಜನತೆಯನ್ನು ದಾರಿ ತಪ್ಪಿಸುತ್ತವೆ ಅವುಗಳಿಂದ ಮುಕ್ತಿ ಪಡೆದು ವ್ಯಸನಮುಕ್ತರಾಗಿ ಬಾಳಬೇಕು ಎಂದು ಶ್ರೀನಿಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸರಸ್ವತಿ ಈಟಿ ಹೇಳಿದರು. ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ಸೆ.೦೪ ಮಧ್ಯಾಹ್ನ ೧೨ ಗಂಟೆಗೆ ಶ್ರೀನಿಧಿ ಸಂಜೀವಿನಿ ಒಕ್ಕೂಟದ ವತಿಯಿಂದ ಪರಿವರ್ತನೆ ಕಾರ್ಯಕ್ರಮದಡಿ ಮಾದಕ ವ್ಯಸನ ಮುಕ್ತ ಕರ್ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಳಕಲ್ ಶ್ರೀಮಠದ ಡಾ ಮಹಾಂತಶ್ರೀಗಳು ಮಹಾಂತ ಜೋಳಿಗೆಯ ಮೂಲಕ ಮಾಡಿದ ಸಾಧನೆ ಅನನ್ಯ ಎಂದು ಬಣ್ಣಿಸಿದರು. ಸಾನಿಧ್ಯವನ್ನು ನಂದವಾಡಗಿ ಮಠದ ಡಾ ಚನ್ನಬಸವ ಮಹಾಸ್ವಾಮಿಗಳು ವಹಿಸಿ ಗ್ರಾಮದಲ್ಲಿ ಇಂತಹ ಮಹತ್ತರ ಕಾರ್ಯಕ್ರಮ ಏರ್ಪಡಿಸಿ ಯುವಜನತೆಗೆ ದಾರಿದೀಪ ಮಾಡಿಕೊಟ್ಟಿ