ಜನ್ನತ್ ನಗರ ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ನಡೆದ ಘಟನೆ ಹಾಗೂ ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವವರ ವಿರುದ್ದ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್, ಭಜರಂಗ ದಳ ಹಾಗೂ ಗಣಪತಿ ಸಮಿತಿಗಳ ಒಕ್ಕೂಟದಿಂದ ಸಾಗರ ಹೋಟೆಲ್ ವೃತ್ತದಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಸಂಘ ಪರಿವಾರದ ಹಿರಿಯರಾದ ನಾರಾಯಣಪ್ಪ ಮಾತನಾಡಿ, ಇವತ್ತು ಹಿಂದೂ ಸಮಾಜ ಕೈಕಟ್ಟಿ ಕುಳಿತು ಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹಿಂದೂ ಸಮಾಜ ಒಂದು ಸಾರಿ ಎದ್ದು ನಿಂತರೆ ಎದುರಿಸುವುದು ನಿಮಗೆ ಕಷ್ಟವಾಗುತ್ತದೆ. ಭದ್ರಾವತಿ ಘಟನೆ ಅತ್ಯಂತ ಹೇಯವಾದದ್ದು. ಇದನ್ನು ಪ್ರಶ್ನೆ ಮಾಡಿದರೆ ನೀವು ರಾಜಕೀಯ ಮಾಡಬೇಡಿ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.