ಯಲ್ಲಾಪುರ :ಪಟ್ಟಣದ ಎ.ಪಿ.ಎಂ.ಸಿ. ರೈತ ಸಭಾಭವನದಲ್ಲಿ ಪ್ರಗತಿ ಸಂಜೀವಿನಿ ರೈತ ಮಹಿಳಾ ಉತ್ಪಾದಕರ ಕಂಪನಿ ಹಮ್ಮಿಕೊಂಡಿದ್ದ ದ್ವಿತೀಯ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ತಾ.ಪಂ. ಆಡಳಿತಾಧಿಕಾರಿ ನಟರಾಜ ಟಿ.ಎಚ್,ಮಾತನಾಡಿ ಮಹಿಳೆಯರು ಸಬಲರಾಗುತ್ತಿದ್ದಾರೆಂದರೆ ಸಶಕ್ತ ಸಮಾಜ ನಿರ್ಮಾಣವಾಗಿದೆ ಎಂದರ್ಥಎಂದರು. ಕೃಷಿ ಇಲಾಖೆಯ ಸಹಾಯ ಕ ನಿರ್ದೇಶಕ ನಾಗರಾಜ ನಾಯ್ಕ ಮಾತನಾಡಿ ನಿಮ್ಮಲ್ಲಿರುವ ವಸ್ತುವನ್ನು, ಕೌಶಲ್ಯದಿಂದ ವಿಭಿನ್ನವಾಗಿ ಪರಿಚಯಿಸಿದರೆ ಮಾರುಕಟ್ಟೆಯಲ್ಲಿ ತನ್ನದೇ ಆದ ಬ್ರಾಂಡ್ ಸೃಷ್ಟಿಯಾಗುತ್ತದೆ ಅದರೊಂದಿಗೆ ಉತ್ತಮ ಗುಣ ಮಟ್ಟ,ಸೇವೆಯನ್ನು ನೀಡಿದರೆ ಹೆಚ್ಚಿನ ಯಶಸ್ಸು ಸಾಧ್ಯ ಎಂದರು.