ರಣರೋಚಕ ಕಬಡ್ಡಿ ಪಂದ್ಯಾವಳಿಯಲ್ಲಿ ತೊರೆಕೋಲಮ್ಮನಹಳ್ಳಿ ಸ.ಹಿ.ಪ್ರಾ.ಶಾಲೆ ಬಾಲಕಿರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ನಗರದ ಬಿಎಂ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ತೊರೆಕೋಲಮ್ಮನಹಳ್ಳಿ ಸ.ಹಿ.ಪ್ರಾ.ಶಾಲೆ ಬಾಲಕಿರಿಗೆ ಹಾಗು ಗುಂತಕೋಲಮ್ಮನಹಳ್ಳಿ ಸ.ಹಿ.ಪ್ರಾ. ಶಾಲೆ ಬಾಲಕಿಯರ ನಡುವೆ ಪೈನಲ್ ಪಂದ್ಯಾವಳಿಯು ಎಲ್ಲರಿಗೂ ರೋಮಾಂಚನ ನೀಡುವುದರ ಜೊತೆಗೆ ಕ್ರೀಡಾ ಸ್ಪೂರ್ತಿಯನ್ನು ಮೆರೆಸುವ ಮೂಲಕ ಸಂಭ್ರಮ ನೀಡಿತು. ಈ ಪಂದ್ಯಾವಳಿಯಲ್ಲಿ ತೊರೆಕೋಲಮ್ಮನಹಳ್ಳಿ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಗುಂತಕೋಲಮ್ಮನಹಳ್ಳಿ ಸ.ಹಿ.ಪ್ರಾ. ಶಾಲಾ ಬಾಲಕಿಯರು ಪಡೆದುಕೊಂಡಿದ್ದಾರೆ