ಗಣೇಶ ಹಬ್ಬದ ಹಿನ್ನೆಲೆ ನಗರದ ಮುಖ್ಯ ರಸ್ತೆಗಳಲ್ಲಿ ಗುರುವಾರ ನಾನಾ ವಿನ್ಯಾಸದ ಗಣೇಶ ಮೂರ್ತಿಗಳು ಮಾರಾಟಕ್ಕೆ ಬಂದಿಳಿದಿವೆ. ಪ್ರಥಮ ಪೂಜಿತ ಗಣೇಶ ಚತುರ್ಥಿಗೆ ಜನ ಕಾತರದಿಂದ ಕಾಯುತ್ತಿದ್ದಾರೆ. ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ತರಹೇವಾರಿ ಗಣೇಶನ ಮೂರ್ತಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಮಾರಾಟಕ್ಕಾಗಿ ನಾನಾ ವಿನ್ಯಾಸದ ಗಣೇಶ ಮೂರ್ತಿಗಳು ಸಾರ್ವಜನಿಕರನ್ನು ಕೈಬೀಸಿ ಕರೆಯುವಂತೆ ಸೆಳೆಯುತ್ತಿವೆ.ನಗರದ ಚಿತ್ರದುರ್ಗ ಮುಖ್ಯ ರಸ್ತೆ, ಸೇರಿದಂತೆ ವಿವಿಧ ಕಡೆ ತಾತ್ಕಾಲಿಕ ಮಳಿಗೆಗಳನ್ನು ತೆರೆದು ಕಲಾವಿದರು ಮೂರ್ತಿಗಳ ಮಾರಾಟ ಸಿದ್ದತೆ ನಡೆಸಿದ್ದಾರೆ.