ಆಗಸ್ಟ್ 25 ರ ಬೆಳಿಗ್ಗೆ 11.30ರ ಸುಮಾರಿಗೆ ನೃಪತುಂಗ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ತರಗತಿ ಬಾಯ್ಕಾಟ್ ಮಾಡಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಕೆ ಆರ್ ಸಮೀಪ ಇರುವ ನೃಪತುಂಗ ವಿಶ್ವ ವಿದ್ಯಾಲಯ ದಿಢೀರ್ ಅಂತ 35 ಪರ್ಸೆಂಟ್ ಶುಲ್ಕ ಏರಿಕೆ ಮಾಡಿತ್ತು. ಅವೈಜ್ಞಾನಿಕ ಶುಲ್ಕ ಏರಿಕೆ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು ಪ್ರೊಟೆಸ್ಟ್ ಮಾಡಿದ್ದಾರೆ. ವಿದ್ಯಾರ್ಥಿಗಳ ಶಕ್ತಿ ಪ್ರದರ್ಶನಕ್ಕೆ ಬೆಚ್ಚಿದ ವಿವಿ ಶುಲ್ಕ ಏರಿಕೆ ನಿರ್ಧಾರ ಕೈ ಬಿಟ್ಟಿದೆ. ಶುಲ್ಕ ಏರಿಕೆ ಮಾಡಲ್ಲ ಅಂತ ಆಗಸ್ಟ್ 25 ರಾತ್ರಿ 8 ಗಂಟೆಗೆ ಸುತ್ತೋಲೆ ಹೊರಡಿಸಿದೆ.