ಕಳೆದ ಒಂದು ವಾರದಿಂದ ಮುಡುಗೆರೆ ತಾಲೂಕಿನ ಪಲ್ಗುಣಿ ಗ್ರಾಮದಲ್ಲಿ ಕಾರ್ಮಿಕರು ಹಾಗೂ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕಾಳಿಂಗ ಸರ್ಪ ಕೊನೆಗೂ ಸೆರೆಯಾಗಿದೆ. ಗ್ರಾಮದ ರಸ್ತೆ ಮತ್ತು ಮನೆಗಳ ಅಂಗಳದಲ್ಲಿ ಪದೇ ಪದೇ ಕಾಣಿಸಿಕೊಂಡು ಕಾಟ ಕೊಡುತ್ತಿದ್ದ ಕಾಳಿಂಗ ಸರ್ಪವನ್ನ ಸ್ನೇಕ್ ಆರೀಫ್ ಹಿಡಿದು ಚಾರ್ಮಾಡಿ ಘಾಟಿಗೆ ಬಿಟ್ಟು ಬಂದಿದ್ದಾರೆ. ತೋಟಗಳಿಗೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು. ಇದೀಗ ಸದ್ಯ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಾರ್ಯಾಚರಣೆ ಶುಕ್ರವಾರ 10 ಗಂಟೆ ಸುಮಾರಿಗೆ ನಡೆದಿದ್ದು, ಇದೆ ವೇಳೆ ಅರಣ್ಯ ಸಿಬ್ಬಂದಿಗಳು ಸ್ನೇಕ್ ಆರಿಫ್ ಗೆ ಸಾಥ್ ನೀಡಿದರು