ಹಾವೇರಿ ನಗರ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದವು. ವಿವಿಧ ಸಂಘಟನೆಗಳು ಪಕ್ಷಗಳು ನಗರದ ರಸ್ತೆಯಲ್ಲಿನ ಗುಂಡಿ ಮುಚ್ಚಲು ಆಗ್ರಹಿಸಿ ಪ್ರತಿಭಟನೆ ಮಾಡಿದ್ದರು. ಮುಂಗಾರು ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ನಗರಸಭೆ ನಗರದ ರಸ್ತೆಗಳಲ್ಲಿನ ತಗ್ಗು ಗುಂಡಿ ಮುಚ್ಚಲು ಮುಂದಾಗಿದೆ. ಹಾವೇರಿಯ ಪ್ರಮುಖ ವೃತ್ತಗಳಲ್ಕಿ ಒಂದಾದ ಜೆಹೆಚ್ ಪಟೇಲ್ ವೃತ್ತದಲ್ಲಿ ಕಾರ್ಮಿಕರು ತಗ್ಗುಗುಂಡಿಗಳಿಗೆ ಡಾಂಬರ್ ಹಾಕುವ ಮೂಲಕ ನಗರದ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.