ಶಿರಸಿ: ತತ್ವನಿಷ್ಠ ದಿನ ಪತ್ರಿಕೆ ಹಾಗೂ ಟೆಕ್ ವೈದ್ಯ ವಾರ ಪತ್ರಿಕೆ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ, ಗಾನ ಕುಂಚ ಕಾರ್ಯಕ್ರಮವು ಆ.31, ರವಿವಾರದಂದು ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಪತ್ರಕರ್ತ, ತತ್ವನಿಷ್ಠ ಪತ್ರಿಕೆ ಪ್ರಧಾನ ಸಂಪಾದಕ ಪ್ರವೀಣ ಹೆಗಡೆ ಹೇಳಿದರು ಅವರು ಭಾನುವಾರ ಜಿಲ್ಲಾ ಪತ್ರಿಕಾ ಕಚೇರಿಯಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿ, ಪ್ರಾದೇಶಿಕ ದಿನ ಪತ್ರಿಕೆಯ ಜೊತೆ ಟೆಕ್ನಾಲಜಿ ಕುರಿತು ಟೆಕ್ ವೈದ್ಯ ಎಂಬ ವಾರ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಗುತ್ತದೆ. ಟೆಕ್ನಾಲಜಿಯ ವಿಶಾಲ ಪರಿಧಿಯನ್ನು ಪರಿಚಯಿಸುವ ಕೆಲಸವನ್ನು ಟೆಕ್ ವೈದ್ಯ ಪತ್ರಿಕೆ ಮಾಡಲಿದೆ. ಎಂದರು.