ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದಲ್ಲಿ ವಿವಿಧಡೆ ಬಾಂಬ್ ಇಡಲಾಗಿದೆ ಎಂಬ ಅನಾಮಿಕ ಕರೆ ಬಂದಿತ್ತು. ವಿಷಯ ತಿಳಿದ ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ತಪಾಸಣೆ ನಡೆಸಿತ್ತು. ಇದೀಗ ಇದೊಂದು ಹುಸಿಬಾಂಬ್ ಕರೆ ಎಂದು ಹಾವೇರಿ ಎಸ್ಪಿ ಶುಕ್ರವಾರ ಮಧ್ಯಾನ್ಹ ೪ ಗಂಟೆಗೆ ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಹೇಳಿಕೆ ನೀಡಿರುವ ಎಸ್ಪಿ ಯಶೋಧಾ ಇದೊಂದು ಮಾನಸಿಕ ಅಸ್ವಸ್ಥನ ಕರೆ ಎಂದು ತಿಳಿಸಿದ್ದಾರೆ