ಸುತ್ತಿಗೆಯಿಂದ ತಲೆಗೆ ಹೊಡೆದು ಮಹಿಳೆಯನ್ನ ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಮ್ಮೆಗೆಪುರದ ಗಾಣಪ್ಪ ಲೇಔಟ್ ನಲ್ಲಿ ನಡೆದಿದೆ. ಈ ಬಗ್ಗೆ ಮೇ 4ರಂದು ಸಂಜೆ 8ಗಂಟೆಗೆ ಸೌತ್ ಎಂಡ್ ಸರ್ಕಲ್ ನ ತಮ್ಮ ಕಚೇರಿಯಲ್ಲಿ ಮಾಹಿತಿ ನೀಡಿರುವ ದಕ್ಷಿಣ ವಿಭಾದ ಡಿಸಿಪಿ ಲೋಕೇಶ್ ಪ್ರಕರಣ ಸಂಬಂಧ ತನಿಖೆ ನಡೆಸಲಾಗ್ತಿದೆ. ಕೌಟುಂಬಿಕ ಕಲಹ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ಇದೆ. ಗಂಡನಿಂದಲೇ ಕೊಲೆ ನಡೆದಿರುವ ಶಂಕೆ ಇದ್ದು ಸಂಬಂಧಿಕರ ಕುಮ್ಮಕ್ಕು ಇರುವ ಮಾಹಿತಿ ಇದೆ. ಸದ್ಯ ಮಹಿಳೆ ಮಗನಿಂದ ದೂರು ಪಡೆದು ತನಿಖೆ ನಡೆಸಲಾಗ್ತಿದೆ. ಎಸ್ಕೇಪ್ ಆಗಿರುವ ಮಹಿಳೆ ಗಂಡ ಆರೋಪಿ ಸುರೇಶ್ ನನ್ನ ಹುಡುಕಾಟ ಮಾಡಲಾಗ್ತಿದೆ ಎಂದರು.