ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. `ಕಿಚ್ಚ 47 ಹೆಸರಿನಲ್ಲಿ ಚಿತ್ರೀಕರಣವಾಗುತ್ತಿರುವ ಕಿಚ್ಚನ ಸಿನಿಮಾಕ್ಕೆ ಮಾರ್ಕ್ ಅನ್ನೋ ಟೈಟಲ್ ಕೂಡ ಫಿಕ್ಸ್ ಆಗಿದೆ. ಸೋಮವಾರ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ಗ್ರ್ಯಾಂಡ್ ಬರ್ತಡೇ ಸೆಲಬ್ರೇಷನ್ ಗೂ ಮುನ್ನ ಮಾರ್ಕ್ ಸಿನಿಮಾದ ಶೀರ್ಷಿಕೆ ರಿವೀಲ್ ಮಾಡಲಾಗಿದೆ. ಮ್ಯಾಕ್ಸ್ ಚಿತ್ರತಂಡದ ಜೊತೆಗಿನ 2ನೇ ಸಿನಿಮಾ ಇದಾಗಿದ್ದು, ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ. ಕ್ರಿಸ್ ಮಸ್ ಹಬ್ಬಕ್ಕೆ ಈ ಚಿತ್ರ ತೆರೆಕಾಣಲಿದೆ.