ನಗರದ ಆಲನಹಳ್ಳಿಯಲ್ಲಿರುವ ಶ್ರೀ ಬಸವೇಶ್ವರ ಯೋಗ ಉದ್ಯಾನವನದಲ್ಲಿ ಪರಿಸರ ಬಳಗದಿಂದ ಮಕ್ಕಳಿಗೆ ಮಣ್ಣಿನ ಗಣಪನನ್ನು ತಯಾರಿಸುವ ಕಾರ್ಯಾಗಾರ ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ನೂರಾರು ಮಕ್ಕಳು ಪಾಲ್ಗೊಂಡು ಪರಿಸರ ಬಳಗದ ಮಹಿಳೆಯರು ನೀಡಿದ ಮಾರ್ಗದರ್ಶನದಂತೆ ಮಣ್ಣು ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸಿ, ಎಲ್ಲರೂ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನೇ ಬಳಸುವಂತೆ ಜಾಗೃತಿ ಸಂದೇಶ ನೀಡಿದರು.