ಹಾಸನ: ಮೆರವಣಿಗಳಲ್ಲಿ ಡಿಜೆ ಬಳಕೆಯನ್ನು ನಿಷೇಧಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯರ ಸರಕಾರದ ಅದೇಶ ಸ್ವಾಗತಾರ್ಹ ಎಂದು ಆಜಾದ್ ಟಿಪ್ಪು ಸಂಘರ್ಷ ಸಮಿತಿಯ ಅಧ್ಯಕ್ಷ ಮುಬ್ಬಶೀರ್ ಅಹ್ಮದ್ ಹೇಳಿದರು.ರಾಜಕೀಯ ಪಕ್ಷಗಳು, ಧಾರ್ಮಿಕ ಕಾರ್ಯಕ್ರಮಗಳು, ವಿಜಯೋತ್ಸವದ ಪರ-ವಿರೋಧಗಳ ಕಾರ್ಯಕ್ರಮಗಳ ಮೆರವಣಿಗೆಯಲ್ಲಿ ಡಿಜೆ ಬಳಸಿ ಸಂಭ್ರಮ ಆಚರಿಸಲಾಗುತ್ತಿತ್ತು. ಇದರಿಂದ ಮಕ್ಕಳಿಗೆ, ಹೃದಯ ಸಂಬAಧಿ ಕಾಯಿಲೆ ಇರುವ ರೋಗಿಗಳಿಗೆ ಸಮಸ್ಯೆಯಾಗುತ್ತಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದರು.ಹಬ್ಬಗಳ ಮೆರವಣಿಗೆಯನ್ನು ಶಾಂತಿಯುತವಾಗಿ ಅಚರಿಸಲು ಜಿಲ್ಲಾಡಳಿತ ಸಂಪೂರ್ಣ ಹೊಣೆ ಹೊತ್ತಿರುತ್ತವೆ ಸರ್ಕಾರದ ನಿರ್ಧಾರ ಒಳ್ಳೆಯ ಬೆಳವಣಿಗೆ ಎಂದರು.