ಬೀದರ : ತಾಲುಕಿನ ಜನವಾಡ ಸಮೀಪದ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಇದರ ಆಡಳಿತ ಮಂಡಳಿಗೆ ನಿರ್ದೇಶಕರ ಚುನಾವಣೆಯನ್ನು ಸೆಪ್ಟೆಂಬರ್.27 ರಂದು ನಿಗದಿಪಡಿಸಲಾಗಿರುತ್ತದೆ ಎಂದು ಚುನಾವಣಾಧಿಕಾರಿಗಳು, ನಾಸಸಕಾ(ನಿ) ಇಮಾಮಪೂರ ಹಾಗೂ ಸಹಾಯಕ ಆಯುಕ್ತರು ಬೀದರ ಅವರು ಗುರುವಾರ ಸಂಜೆ 5ಗಂಟೆಗೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.