ಪಾಕಿಸ್ತಾನದ ಉಗ್ರರ ನೆಲೆ ಮೇಲೆ ಅಟ್ಯಾಕ್ ಹಿನ್ನೆಲೆ ರಾಜ್ಯದಲ್ಲಿ ಎಲ್ಲ ಸಚಿವ, ಶಾಸಕರು ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಸಂಜೆ 8ಗಂಟೆ ಸುಮಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ ಪ್ರತಿಕ್ರಿಯೆ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಪೆಹಲ್ ಗಾಮ್ ನ ಅಟ್ಯಾಕ್ ನಲ್ಲಿ ಆದ ಘಟನೆಯಿಂದ ಇಡೀ ದೇಶ ದುಃಖದಲ್ಲಿತ್ತು. 26ಜನ ಪ್ರವಾಸಿಗರು ಸಾವನ್ನಪ್ಪಿದ್ದರಿಂದ ಪಾಕಿಸ್ತಾನಕ್ಕೆ ಬುದ್ದಿ ಕಲೆಸುವುದು ಜನರ ಬಯಕೆ ಆಗಿತ್ತು. ಸದ್ಯಕ್ಕೆ ಅದರ ಬಗ್ಗೆ ಕೆಲಸ ಆಗ್ತಿದೆ. ಹತ್ತು ವರ್ಷಕ್ಕೆ ಮುಂಚೆಯೇ ಈ ರೀತಿ ಮಾಡಿದ್ರೆ ಪುನರಾವರ್ತನೆ ಆಗ್ತಿರಲಿಲ್ಲ.. ತಡ ಆದ್ರೂ ಪರವಾಗಿಲ್ಲ ಜನರಿಗೆ ಸಮಾಧಾನ ಆಗಿದೆ.. ನಮ್ಮ ದೇಶದ ಸೈನಿಕರಿಗೆ ಒಳ್ಳೆಯದಾಗಲಿ ಅಂದರು