ಎರಡು ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬನ ಕಾಲು ಕಟ್ ಆಗಿದ್ದು, ಉದ್ರಿಕ್ತಗೊಂಡ ಜನರ ಗುಂಪು ವೇಗವಾಗಿ ಬಂದ ಬೈಕ್ನಲ್ಲಿದ್ದ ಯುವಕರಿಗೆ ಥಳಿಸಿದ ಘಟನೆ ಶಿವಮೊಗ್ಗ ತಾಲೂಕಿನ ನಿದಿಗೆ ಬಳಿ ಮಂಗಳವಾರ ತಡರಾತ್ರಿ ನಡೆದಿದ್ದು ಬುಧವಾರ ಬೆಳಿಗ್ಗೆ 7 ಗಂಟೆಗೆ ಪಬ್ಲಿಕ್ ಆ್ಯಪ್ ಗೆ ಮಾಹಿತಿ ಲಭ್ಯವಾಗಿದೆ. ನಿದಿಗೆ ಗ್ರಾಮದ 45 ರಿಂದ 50 ವಯಸ್ಸಿನ ವ್ಯಕ್ತಿ ಕಾಲು ಕಳೆದುಕೊಂಡವರು. ನಿದಿಗೆ ಗ್ರಾಮದ ವ್ಯಕ್ತಿ ಗಾರ್ಮೆಂಟ್ಸ್ ಕೆಲಸಕ್ಕೆ ಹೊರಟಿದ್ದು ರಸ್ತೆಯಲ್ಲಿ ತಿರುವು ಪಡೆಯುತ್ತಿದ್ದ ವೇಳೆ ಶಿವಮೊಗ್ಗದಿಂದ ಭದ್ರಾವತಿ ಕಡೆ ಹೊರಟಿದ್ದ ಬೈಕ್ ಗುದ್ದಿದೆ. ಗುದ್ದಿದ ರಭಸಕ್ಕೆ ಎಡಗಾಲು ನೇತಾಡುತ್ತಿತ್ತು. ಉದ್ರಿಕ್ತ ಜನರು ಬೈಕ್ ಸವಾರರಿಗೆ ಥಳಿಸಿದರು.