ಹಾಸನ: ಸುರಿಯೊ ಮಳೆಯಲ್ಲಿ ಕಾಡಾನೆಗಳು ಜಲಕ್ರೀಡೆ ಆಡಿರುವ ಘಟನೆ ಸಕಲೇಶಪುರ ತಾಲ್ಲೂಕಿನ ನಿಡಗೆರೆ ಗ್ರಾಮದ ಕಾಫಿ ತೋಟದಲ್ಲಿ ನಡೆದಿದ್ದು ವೀಡಿಯೋ ಶುಕ್ರವಾರ ಮಧ್ಯಾಹ್ನ ವೈರಲ್ ಆಗಿದೆ. ಕೆರೆಯ ನೀರಲ್ಲಿ ಮಿಂದು ಸಲಗಗಳ ಚಿನ್ನಾಟ ಆಡಿದ್ದು ಕೆಸರು ಮಣ್ಣಿನಲ್ಲಿ ಆಟವಾಡಿ ನೀರಲ್ಲಿ ವಿಹರಿಸಿದ ಆನೆಗಳು ಹಿಂಡು ಬೀಡು ಬಿಟ್ಟು ಆತಂಕ ಸೃಷ್ಟಿ ಮಾಡಿವೆ.. ಗಜಪಡೆ ಹಾವಳಿಯಿಂದ ಕಂಗೆಟ್ಟ ಕಾಫಿ ಬೆಳೆಗಾರರು ನಿರಂತರ ಆನೆ ಹಾವಳಿಗೆ ಅಪಾರ ಪ್ರಮಾಣದ ಬೆಳೆ ನಾಶಮಾಡಿವೆ.ಆನೆಗಳ ವಿಹಾರದ ವೀಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು ಆನೆ ಹಾವಳಿ ತಡೆಗೆ ಜನರು ಒತ್ತಾಯಿಸಿದ್ದು, ವೀಡಿಯೋ ನೋಡಿದವರು ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ.