ತಾಲೂಕಿನಲ್ಲಿ ಮಳೆ ಕೊಂಚ ಬಿಡು ಕೊಡ್ತು ಅಂತಾ ಕಳೆದ ಶುಕ್ರವಾರ ಅಜ್ಜಂಪುರ ತಾಲೂಕಿನ ತಮಟದಹಳ್ಳಿ ಸುತ್ತಮುತ್ತಲಿನ ಕೆಲವು ರೈತರು ಈರುಳ್ಳಿ ಬೆಳೆಯನ್ನು ಕಟಾವು ಮಾಡಿ ಹೊಲದಲ್ಲೇ ಬಿಸಿಲಿಗೆ ಬಿಟ್ಟಿದ್ದರು. ಆದ್ರೆ ಕಳೆದ ರಾತ್ರಿ ಶನಿವಾರ ಇದ್ದಕ್ಕಿದ್ದಂತೆ ಬಿರುಸಿನಿಂದ ಸುರಿದ ಭಾರಿ ಮಳೆಯಿಂದಾಗಿ ಈರುಳ್ಳಿ ಬೆಳೆ ನೀರಿನಲ್ಲಿ ನೆನೆದು ಕೊಳೆಯುವ ಅಂತ ತಲುಪಿದೆ.. ಈ ಬಗ್ಗೆ ಭಾನುವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಳೆಗಾಲಕ್ಕೂ ಮುನ್ನವೇ ಈರುಳ್ಳಿಯನ್ನು ತಮ್ಮ ಜಮೀನಿನಲ್ಲಿರುವ ಅಂತರ್ಜಲವನ್ನು ನಂಬಿ ಈರುಳ್ಳಿ ಬೆಳೆದಿದ್ದರು.ಆದರೆ ಮಳೆ ದಿಡೀರನೆ ಸುರಿದು ಶೇಕಡ 60ರಷ್ಟು ಈರುಳ್ಳಿ, ಕೊಳೆಯುವ ಅಂತ ತಲುಪಿದೆ ಎಂದು ಗ್ರಾಮದ ಸುತ್ತಮುತ್ತಲಿನ ರೈತರು ಆತ