ಯಲ್ಲಾಪುರ: ದ್ವಿಚಕ್ರವಾಹನ ಮಾರಾಟದೊಂದಿಗೆ ಉತ್ತಮ ಸೇವೆ ನೀಡುವ ಮೂಲಕ ಗ್ರಾಹಕರ ವಿಶ್ವಾಸ ,ಆತ್ಮೀಯತೆಗಳಿಸಿರುವ ಭಾಸ್ಕರ ಭಟ್ಟರು ಬೆಳೆಯುತ್ತಿರುವ ಪಟ್ಟಣಕ್ಕೆ ದ್ವಿಚಕ್ರ ವಾಹನಗಳ ಹೊಸ ಶೋರೂಮ್ ಆರಂಭಿಸಿರುವದು ಉತ್ತಮ ಕಾರ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಅವರು ಪಟ್ಟಣದ ಪಾಲಿಕ್ಲಿನಿಕ್ ಬಳಿ ನೂತನ ಶೋರೂಮ್ ಉದ್ಘಾಟಿಸಿ ಮಾತನಾಡಿದರು.ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿಜಯ ಮಿರಾಶಿ, ಮಾಲೀಕ ಭಾಸ್ಕರ ಭಟ್ಟ ಶೀಗೆಪಾಲ ದಂಪತಿ ಮತ್ತಿತರರಿದ್ದರು.