ಹುಬ್ಬಳ್ಳಿ: ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲಿಸ್ತೇನ್ ಧ್ವಜ ಹಿಡಿದು ಸಂಚರಿಸುತ್ತಿದ್ದ ನಾಲ್ವರ ವಿರುದ್ಧ ಇಲ್ಲಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯರಾದ ಮುಬಾರಕ್ ಮಾಮಾಜಿ, ಅಮನ್ ಕಬ್ಬೇನೂರ, ಸಮೀರ್ ನರೇಗಲ್ ಮತ್ತು ಜಾಕೀರ್ ಗುಂಟವಾಲೆ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ, ಗುಂಪು ಘರ್ಷಣೆ ಸೃಷ್ಟಿಸುವ ದುರುದ್ದೇಶದಿಂದ ಆರೋಪಿಗಳು ದೇವಾಂಗಪೇಟೆ ಬಳಿ ಕಾರಿನಲ್ಲಿ ಸಂಚರಿಸುವಾಗ ಪ್ಯಾಲಿಸ್ತೇನ್ ಧ್ವಜ ಹಾರಿಸುತ್ತ ಧಾರ್ಮಿಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.