Download Now Banner

This browser does not support the video element.

ಶಿವಮೊಗ್ಗ: ಮಾರಣಾಂತಿಕ ಹಲ್ಲೆ ಪ್ರಕರಣದ ಮೂವರನ್ನ ಬಂಧಿಸಿದ್ದೇವೆ : ಶಿವಮೊಗ್ಗದಲ್ಲಿ ಎಸ್ಪಿ ಮಿಥುನ್ ಕುಮಾರ್

Shivamogga, Shimoga | Oct 6, 2025
ಶಿವಮೊಗ್ಗ ಊರುಗಡೂರು ಬಳಿಯಲ್ಲಿ ನಿನ್ನೆ ದಿನ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದ ಪ್ರಕರಣ ಸಂಬಂಧ ಮೂವರನ್ನ ಬಂಧಿಸಿದ್ದೇವೆ ಎಂದು ಎಸ್ಪಿ ಮಿಥುನ್‌ ಕುಮಾರ್‌ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸೋಮವಾರ ಸಂಜೆ 6 ಗಂಟೆಗೆ ಮಾತನಾಡಿದ ಅವರು, ಪರ್ದೀನ್ ಪ್ರಕರಣದ ಪ್ರಮುಖ ಆರೋಪಿ, ಈತ ಶಬ್ಬೀರ್​ನ ಸಹೋದರಿಯನ್ನ ಮದುವೆಯಾಗಿದ್ದ. ಆದರೆ ಈ ನಡುವೆ ಇಬ್ಬರು ಬೇರೆ ಬೇರೆಯಾಗಿದ್ದರು. ಈ ವಿಚಾರದಲ್ಲಿ ಮಾತುಕತೆ ಮಾಡುತ್ತಿರುವಾಗ ಶಬ್ಬೀರ್​ ಹಾಗೂ ಶಹಬಾಜ್ ಮೇಲೆ ಪರ್ದೀನ್ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾನೆ. ಫರ್ದೀನ್ ​ಸಾಲ್ಮೀಯರನ್ನ ಪ್ರೀತಿಸಿ ಮದುವೆಯಾಗಿದ್ದರು. ಇತ್ತೀಚಿಗೆ ಅವರ ಮಧ್ಯೆ ಬಿರುಕು ಮೂಡಿತ್ತು ಎಂದರು.
Read More News
T & CPrivacy PolicyContact Us