ಕುಂದಗೋಳ ಮತಕ್ಷೇತ್ರದ ಹಿರೇಹರಕುಣಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಯೋಜನೆ ಅಡಿಯಲ್ಲಿ ಅಂಗನವಾಡಿ ಕೇಂದ್ರ -5 ಕಟ್ಟಡ ಉದ್ಘಾಟನೆ ಮಾಡಿ ಚಾಲನೆ ನೀಡಲಾಯಿತು. ನಂತರ ಹಿರೇಹರಕುಣಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಗರ್ಭಗುಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೇರೆವೇರಿಸಿ, ಹಿರೇಹರಕುಣಿ ಗ್ರಾಮದ ಅತ್ಯಂತ ಪುರಾತನ ದೇವಸ್ಥಾನ ಶ್ರೀ ಕಲ್ಮೇಶ್ವರ ದೇವಸ್ಥಾನದ ಕಲ್ಲಿನ ದೇವಸ್ಥಾನದ ಪ್ರಾರಂಗಣದ ನಿರ್ಮಾಣ ಕಾಮಗಾರಿಗೆ ಶಾಸಕರಾದ ಎಂ.ಆರ್.ಪಾಟೀಲ್ ಅವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.