Download Now Banner

This browser does not support the video element.

ತುಮಕೂರು: ರೈತನಿಗೆ ಪರಿಹಾರ ಕೊಟ್ಟಿಲ್ಲ ಎಂದು ತುಮಕೂರಿನ ಹೇಮಾವತಿ ಭೂಸ್ವಾಧೀನ ಕಚೇರಿ ಜಪ್ತಿಗೆ ಕೋರ್ಟ್ ಆದೇಶ

Tumakuru, Tumakuru | Sep 3, 2025
ರೈತನಿಗೆ ಭೂಸ್ವಾಧೀನ ಪರಿಹಾರ ನೀಡದ ಹಿನ್ನೆಲೆಯಲ್ಲಿ ತುಮಕೂರು ಹೇಮಾವತಿ ಭೂಸ್ವಾಧೀನ ಕಚೇರಿ ಜಪ್ತಿಗೆ ನ್ಯಾಯಾಲಯ ಆದೇಶಿಸಿದೆ. ಕುಣಿಗಲ್ ತಾಲ್ಲೂಕಿನ ಕಿತ್ತನಾಮಂಗಲ ಅಮಾನಿಕೆರೆಯ ಸರ್ವೆ ನಂ.52 ರ 1 ಎಕರೆ 08 ಗುಂಟೆ ಜಮೀನು 2016ರಲ್ಲಿ ಹೇಮಾವತಿ ನಾಲೆಗೆ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಭೂಮಿಗೆ 43 ಲಕ್ಷ ರೂ. ಪರಿಹಾರ ನಿಗದಿ ಮಾಡಲಾಗಿದ್ದರೂ, ರೈತ ಭಾನುಪ್ರತಾಪ್ ಅವರಿಗೆ ಒಟ್ಟು 1 ಕೋಟಿ 21 ಲಕ್ಷ ರೂ. ಪರಿಹಾರ ನೀಡಬೇಕಿತ್ತು. ಪರಿಹಾರ ನೀಡದೇ ಇರುವುದರಿಂದ ಭಾನುಪ್ರತಾಪ್ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ತುಮಕೂರು ನ್ಯಾಯಾಲಯವು ಪರಿಹಾರ ಪಾವತಿಸದ ಹಿನ್ನೆಲೆಯಲ್ಲಿ ಕಚೇರಿ ಜಪ್ತಿ ಮಾಡಲು ಆದೇಶ ಹೊರಡಿಸಿದೆ.
Read More News
T & CPrivacy PolicyContact Us