ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಎರಡನೇ ಕಲಬುರ್ಗಿ ಎಂದು ಪ್ರಖ್ಯಾತಿ ಪಡೆದಿರುವ ಕಲ್ಮಂಗಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರರ 36ನೇ ವರ್ಷದ ಪುರಾಣ ಮಹಾಮಂಗಳದ ಅಂಗವಾಗಿ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ವಿಧಿ ವಿಧಾನದ ಮೂಲಕ ಮಹಾ ರುದ್ರಭಿಷೇಕ ಜರುಗಿತು. ಈ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಹರ ಗುರು ಚರ ಮೂರ್ತಿಗಳು ಗ್ರಾಮದ ಮುಖಂಡರು ಯುವಕರು ಭಾಗಿಯಾಗಿ ಶ್ರೀ ಶರಣಬಸವೇಶ್ವರರ ಕೃಪೆಯ ಪಾತ್ರರಾದರು.