ನವಲಗುಂದ: ನವಲಗುಂದ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸಲು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿತು. ತಹಶಿಲ್ದಾರ ಸುಧೀರ ಸಾಹುಕಾರ್ ಅವರ ನೇತೃತ್ವದ ತಂಡವು ಖನ್ನೂರು, ಕಾಲವಾಡ, ಕರ್ಲವಾಡ, ಅರೇಕುರಹಟ್ಟಿ, ನವಲಗುಂದ, ತಡಹಾಳ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ, ಉದ್ದು, ಹೆಸರು, ಮೆಣಸಿನಕಾಯಿ ಸೇರಿದಂತೆ ಇತರ ಬೆಳೆಗಳಿಗೆ ಆದ ಹಾನಿಯನ್ನು ಪರಿಶೀಲಿಸಲಾಯಿತು..