ಮೆಟ್ರೋ ಸ್ಟೇಷನ್ ಹೆಸರಿಡುವ ವಿಚಾರಕ್ಕೆ ತನ್ನ ನಿವಾಸ ಸದಾಶಿವ ನಗರ ಬಳಿ ಡಿಕೆ ಶಿವಕುಮಾರ್ ಕೊಟ್ಟ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಸಾರ್ವಜನಿಕರಿಂದ ಹಿಡಿದು ಉದ್ಯಮಿವರೆಗೂ ವಿರೋಧ ವ್ಯಕ್ತ ಆಗಿರೋದಲ್ಲದೆ ಖುದ್ದು ಕಾಂಗ್ರೆಸ್ ವಕ್ತಾರರು ವಿರೋಧ ವ್ಯಕ್ತ ಪಡಿಸಿದ್ದಾರೆ. ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಆಕ್ರೋಶ ವ್ಯಕ್ತ ಪಡಿಸಿದ್ದು ಡಿಕೆಶಿ ವಿರುದ್ಧ ಗರಂ ಆಗಿದ್ದಾರೆ. X ನಲ್ಲಿ ಸೆಪ್ಟೆಂಬರ್ ಒಂದರಂದು ಬೆಳಿಗ್ಗೆ 11 ಗಂಟೆ ವಿಡಿಯೋ ಮಾಡಿ ಹರಿ ಬಿಡಲಾಗಿದೆ.