ಸೂಡಾದಿಂದ ತಾಲ್ಲೂಕಿನ ಸೋಗಾನೆ ಸಮೀಪ 156 ನೇ ಸರ್ವೆ ನಂಬರ್ ಸಾಗುವಳಿ ಜಮೀನನ್ನು ವಶಪಡಿಸಿಕೊಳ್ಳಲು ಉದ್ದೇಶಿಸಿರುವುದನ್ನು ಕೈಬಿಡುವಂತೆ ಒತ್ತಾಯಿಸಿ ರೈತರು ಶಿವಮೊಗ್ಗ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಕುಮಾರ್ ನೇತೃತ್ವದಲ್ಲಿ ಶನಿವಾರ ಸಂಜೆ 5 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು. ಶಿವಮೊಗ್ಗ ತಾಲ್ಲೂಕು ನಿಧಿಗೆ ಹೋಬಳಿ ಸೋಗಾನೆ ಸಮೀಪದ 156 ನೇ ಸರ್ವೇ ನಂಬರ್ ಜಮೀನಿನಲ್ಲಿ ನೂರಾರು ರೈತರು ಅಡಿಕೆ, ತೆಂಗು, ರಾಗಿ, ಭತ್ತ ಬೆಳೆಯುತ್ತಾ ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಇಲ್ಲಿನ ಬಹುತೇಕ ರೈತರು ಈ ಹಿಂದೆ ವಿಮಾನ ನಿಲ್ದಾಣ, ಕೇಂದ್ರ ಕಾರಾಗೃಹ, ಕೆಇಬಿ, ಮದ್ಯಪಾನೀಯ, ಆಹಾರ ನಿಗಮ, ಕೆಎಚ್‌ಬಿ ಹೀಗೆ ಹಲವು ಉದ್ದೇಶಗಳಿಗಾಗಿ ಜಮೀನು ಕಳೆದುಕೊಂಡಿದ್ದೇವೆ