ಯಲ್ಲಾಪುರ: ಉಮ್ಮಚ್ಗಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಿಂದ ಮಕ್ಕಳ ಗೋಷ್ಠಿ ಅಕ್ಟೋಬರ್ ೫ ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಇಡೀ ರಾಜ್ಯದ ಆರರಿಂದ ಹತ್ತನೇ ಇಯತ್ತೆಯ ವರೆಗಿನ ಆಯ್ದ ಮಕ್ಕಳು ಬರುತ್ತಾರೆ. ಹೊರಗಿನಿಂದ ಬಂದವರಿಗೆ ಸ್ಥಳೀಯರ ಮನೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಸೀತೆಯ ಕುರಿತಾದ ಸೀತಾನುಸಂಧಾನ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಂದರೆ ಮಕ್ಕಳು ಸೀತೆಯ ವಿಷಯದಲ್ಲಿ ಮಾತನಾಡುತ್ತಾರೆ. ಎಂದು ಅಖಿಲ ಭಾರತೀಯ ಸಾಹಿತ್ಯಪರಿಷತ್ ನ ಎಂದು ರಾಜ್ಯ ಪ್ರಧಾನ ಕಾರ್ಯ ದರ್ಶಿ ರಘುನಂದನ ಭಟ್ಟ ಹೇಳಿದರು.