ಹುಬ್ಬಳ್ಳಿ ದುರ್ಗದ ಬೈಲ್ ಸರ್ಕಲ್ ಬಳಿ ಟೆಂಡರ್ ಪಡೆದವರು ಹಾಗೂ ವ್ಯಾಪಾರಸ್ಥ ನಡುವೆ ಮಾತಿನ ವಾಗ್ವಾದ ನಡೆದ ಹಿನ್ನಲೆ ಪ್ರತಿಭಟನೆ ಮಾಡಲಾಗಿತ್ತು. ಈ ಹಿನ್ನಲೆ ಹುಬ್ಬಳ್ಳಿ ಧಾರವಾಡ ಮೇಯರ ಜ್ಯೋತಿ ಪಾಟೀಲ್ ಭೇಟಿನೀಡಿ ಪರಿಶೀಲನೆ ನಡೆಸಿದರು. ನಿನ್ನೆ ದುರ್ಗದ ಬೈಲ್ ಬಳಿ ಪಾರ್ಕಿಂಗ್ ವಿಚಾರ ಇಲ್ಲಿ ವ್ಯಾಪಾರಸ್ತು ಹಾಗೂ ಸ್ಥಳೀಯರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಇಂದು ಕುದ್ದು ಮೇಯರ್ ಜ್ಯೋತಿ ಪಾಟೀಲ್ , ಉಪಮೇಯರ್ ಸಂತೋಷ್ ಚೌಹಾಣ್, ಪಾಲಿಕೆ ಆಯುಕ್ತರಾದ ರುದ್ರೇಶ್ ಗಾಳಿ , ಭೇಟಿನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಮೆಣಸಿನಕಾಯಿ ಉಪಸ್ಥಿತರಿದ್ದರು.