ತಂದೆಯ ಅನಾರೋಗ್ಯದ ಚಿಕಿತ್ಸೆಯ ಖರ್ಚಿಗಾಗಿ ದ್ವಿಚಕ್ರ ವಾಹನಗಳನ್ನ ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನ ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆಂಧ್ರಪ್ರದೇಶದ ಅನಂತಪುರ ಮೂಲದ ಫಿರೋಜ್ ಬಂಧಿತ ಆರೋಪಿ. ಪ್ರಕರಣದ ಕುರಿತು ಸೆಪ್ಟೆಂಬರ್ 23ರಂದು ಮಧ್ಯಾಹ್ನ 12 ಗಂಟೆಗೆ ಮಾಹಿತಿ ನೀಡಿದ ಪೊಲೀಸರು,'ಚಾಲಕನಾಗಿದ್ದ ಫಿರೋಜ್‌ಗೆ ಬರುತ್ತಿದ್ದ ಆದಾಯದಲ್ಲಿ ಜೀವನ ಸಾಗಿಸುವುದು ಕಷ್ಟವಾಗಿದ್ದಾಗ ಊರಿನಲ್ಲಿದ್ದ ಆತನ ತಂದೆ ಸಹ ಖಾಯಿಲೆಗೆ ತುತ್ತಾಗಿದ್ದರು.ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಪರದಾಟ ನಡೆಸಿದ್ದ ಫಿರೋಜ್, ಒಮ್ಮೆ ದ್ವಿಚಕ್ರ ವಾಹನವೊಂದನ್ನ ಕದ್ದು ಮಾರಾಟ ಮಾಡುವುದರಲ್ಲಿ ಯಶಸ್ವಿಯಾಗಿದ್ದ.ಆ ಬಳಿಕ ಕಳ್ಳತನವನ್ನೇ ಫುಲ್ ಟೈಮ್ ಕಾಯಕ ಮಾಡಿಕೊಂಡಿದ್ದ.