ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಬಗ್ಗೆ ಕೆಲವೇ ದಿನಗಳ ಹಿಂದೆ ಸುದ್ದಿ ಹೊರಬಿದ್ದಿತ್ತು. ಕೊಡಗು ಮೂಲದ ರೋಷನ್ ಜೊತೆ ಆ್ಯಂಕರ್ ಅನುಶ್ರೀ ಹಸೆಮಣೆ ಏರಲಿದ್ದಾರೆ. ಮದುವೆಗೆ ದಿನಾಂಕ ಕೂಡ ನಿಗದಿ ಆಗಿದೆ. ಆಗಸ್ಟ್ 28ರಂದು ಅನುಶ್ರೀ ಮತ್ತು ರೋಷನ್ ಅವರ ಮದುವೆ ನಡೆಯಲಿದೆ. ಈಗಾಗಲೇ ಆಪ್ತರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಅನುಶ್ರೀ ಮದುವೆಯ ಆಹ್ವಾನ ಪತ್ರಿಕೆ ತುಂಬಾ ಸರಳವಾಗಿದೆ. ‘ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ’ ಎಂದು ಆಹ್ವಾನ ಪತ್ರಿಕೆಯಲ್ಲಿ ಬರೆಯಲಾಗಿದೆ. ಆ.28ಕ್ಕೆ ಬೆಳಗ್ಗೆ 10.56ಕ್ಕೆ ಮಾಂಗಲ್ಯ ಧಾರಣೆ ನಡೆಯಲಿದೆ.