ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಲೆನಾಡು ಗಿಡ್ಡು, ಹಸುಗಳ ಕಳ್ಳತನ ಮಿತಿಮೀರಿದೆ... ಕೊಪ್ಪ ಪಟ್ಟಣದ ಸಮೀಪದಲ್ಲಿರುವ ಬಾಳ ಗಡಿ ಗ್ರಾಮದಲ್ಲಿ ದೇವಾಲಯದ ಬಳಿ ಮಲಗಿದ್ದ ಹಸುವನ್ನು ಗೋ ಕಳ್ಳರು ಕಾರಿನಲ್ಲಿ ಬಂದು ಕ್ಷಣಮಾತ್ರದಲ್ಲಿ ಕದ್ದು ಪರಾರಿಯಾಗಿದ್ದಾರೆ. ಘಟನೆ ಕಳೆದ ಬುಧವಾರ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ನಡೆದಿದ್ದು, ಸಿ.ಸಿ ಕ್ಯಾಮೆರಾ ಪರಿಶೀಲಿಸಿದಾಗ ಶನಿವಾರ 12 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ. ಕೊಪ್ಪ ಪಟ್ಟಣದಲ್ಲಿ ಸಾರ್ವಜನಿಕರ ಒಂದು ಅಂದಾಜಿನ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ರಸ್ತೆ ಬದಿ ಮಲಗುವ ಮಲೆನಾಡು ಗೆದ್ದು ಹಸುಗಳು ಇದ್ದವು. ಆದರೆ ಪ್ರಸ್ತುತ ವರ್ಷ ಕೇವಲ 40 ರಿಂದ 50 ಹಸುಗಳು ಮಾತ್ರ ಉಳಿದಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಗೋ ಹತ್ಯೆ ನಿಷೇಧ ಕ