ಕೊರಟಗೆರೆ ತಾಲ್ಲೂಕಿನ ಹನುಮಂತಯ್ಯನಪಾಳ್ಯದಲ್ಲಿ ಶ್ರೀ ದೊಡ್ಡಮ್ಮ ದೇವಿಯ ಸ್ಥಿರಬಿಂಬ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮವು ಭಕ್ತಿಭಾವದಿಂದ ಭಾನುವಾರ ಮಧ್ಯಾಹ್ನ 3 ಗಂಟೆಯಲ್ಲಿ ನೆರವೇರಿತು. ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ದೇವಾಲಯಗಳ ಮಹತ್ವವನ್ನು ತಿಳಿಹೇಳಿದರು. ದೇವಾಲಯ ಕಟ್ಟಡ ನಿರ್ಮಾಣಕ್ಕೆ ಕಾರಣರಾದ ಉದ್ಯಮಿ ನಿಲೇಶ್ ಮತ್ತು ಶಶಿಧರ್ ರವರಿಗೆ ಆಶೀರ್ವಾದ ನೀಡಿದ್ರು. ಸುತ್ತೂರು, ಸಿದ್ದರಬೆಟ್ಟ, ಎಲೆರಾಂಪುರ, ಕಾರದೇಶ್ವರ, ವಿರಕ್ತ ಹಾಗೂ ಹೊನ್ನಮ್ಮಗವಿ ಶ್ರೀಮಠಗಳ ಸ್ವಾಮೀಜಿಗಳು ಭಾಗವಹಿಸಿದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನಟ ಅರ್ಜುನ್ ಯೋಗೀಶ್ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು