ಕಂಪ್ಲಿ ಪಟ್ಟಣದಲ್ಲಿ ಐದು ಮಟ್ಕಾ ಪಾಯಿಂಟ್ಗಳು ಆ್ಯಕ್ಟಿವ್ ಆಗಿ ಕೆಲಸ ಮಾಡುತ್ತಿವೆ. ಅದರಲ್ಲೂ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಮಟ್ಕಾ ದಂಧೆ ನಡೆಯುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ನಾರಾಯಣ ಎನ್ನುವವರು ವಿಡಿಯೋ ಸೆರೆ ಹಿಡಿಯೋ ಮೂಲಕ ಸಾಮಾಜಿಕ ಜಾಲ ತಾಣದ ವಿವಿಧ ಗ್ರೂಪ್ಗಳಲ್ಲಿ ಹರಿಬಿಟ್ಟಿದ್ದಾರೆ. ಪರಿಣಾಮ ಆತನ ಮೇಲೆ ಹಲ್ಲೆ ಮಾಡಿದ ದಂಧೆಕೋರರು ಪ್ರಾಣ ಬೆದರಿಕೆ ಹಾಕಿದ್ದಾರೆ. ಇದೀಗ ಕಂಪ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ನಾರಾಯಣ ಸ್ವಾಮಿ ತನಗೆ ರಕ್ಷಣೆ ನೀಡೋದ್ರ ಜೊತೆ ದಂಧೆಗೆ ಕಡಿವಾಣ ಹಾಕಿರಿ ಎಂದು ಮನವಿ ಮಾಡುತ್ತಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಮಟ್ಕಾ ಪಾಯಿಂಟ್ಗಳಿಗೆ ತೆರಳುವ ಮೂಲಕ ರಹಸ್ಯವಾಗಿ ಮಟ್ಕಾ ದಂಧೆ ಕರಾಳ ಮುಖ ಸೆರೆ ಹಿಡಿದಿದ್ದಾರೆ. ಮಟ್ಕಾ ಬರೆಸ