ಗುರುವಾರ ಸಂಜೆ 6 ಗಂಟೆಯಲ್ಲಿ ಕೋಲಾರ ಜಿಲ್ಲೆಯ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಹಳ್ಳಿಗಳಿಗೆ ಗಣೇಶ ಹಬ್ಬ ಹಾಗೂ ಗಣೇಶ ವಿರ್ಸಜನೆ ಸಂಬಂದ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ರವರು ಭೇಟಿ ನೀಡಿ ಸೂಕ್ತ ಸಲಹೆ ಸೂಚನೆ ಗಳನ್ನು ಪೋಲಿಸ್ ಅಧಿಕಾರಿಗಳಿಗೆ ಮತ್ತು ಗಣೇಶ ಸಮಿತಿಯ ಮುಖಂಡರುಗಳಿಗೆ ನೀಡಿದ್ದಾರೆ ಇದೇ ಸಂದರ್ಭದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರೆಕೊಟ್ಟಿದ್ದಾರೆ