ಕಾರವಾರ : ಜಿಲ್ಲೆಯ ದಾಂಡೇಲಿಹಾಗೂ ಬೇರೆ ಜಿಲ್ಲೆ ಗಳಾದ ಬೆಂಗಳೂru,ಬೆಳಗಾವಿ, ಸೇರಿದಂತೆ ಮುಂತಾದ ಜಿಲ್ಲೆಗಳಲ್ಲಿ ಬೆಲೆ ಬಾಳುವ ಬೈಕ್ ಗಳನ್ನು ಕದಿಯುತ್ತಿದ್ದ ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ದಾಂಡೇಲಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಧಾರವಾಡ ಕಲಘಟಗಿಯ ಕೊಂಡವಾಡದ ಅಭಿಷೇಕ ವಿ.ಪವಾರ್, ತುಮರಿಕೊಪ್ಪದ ವಿಲ್ಸನ್ ಜೆ, ಗುಂಡಿ,ಕಲಘಟಗಿಯ ಗೌಸ್ ಮೊಹಮ್ಮದ್ ಬೇಪಾರಿ, ಮಾಚಾಪುರದ ದೇವೇಂದ್ರ ಎಲ್ .ಲಮಾಣಿ, ಅಕ್ಕಿಓಣಿಯ ಮಹಮ್ಮದ್ ತೌಸಿಫ್, ಬಂಧಿತ ಆರೋಪಿಗಳಾಗಿದ್ದಾರೆ.