ಭಾರತದ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಸೆಪ್ಟೆಂಬರ್ 01 ಮತ್ತು 02 ರಂದು ಮೈಸೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸ್ವಚ್ಛತೆ, ರಿಂಗ್ ರಸ್ತೆ ಸ್ವಚ್ಛತೆ, ಗುಂಡು ಮುಚ್ಚುವ ಕಾರ್ಯ, ಮೀಡಿಯನ್ ಸ್ವಚ್ಛತೆ, ಫ್ಲೆಕ್ಸ್ ಮತ್ತು ಬ್ಯಾನರ್ಗಳ ತೆರವು ಕಾರ್ಯದ ಕುರಿತು ಇಂದು ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರು ಪರಿಶೀಲನೆ ನಡೆಸಿದರು.