ನಾಪೋಕ್ಲು: ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಪೇರೂರು ಗ್ರಾಮದಲ್ಲಿ ಬೆಳೆಗಾರರ ತೋಟಗಳಲ್ಲಿ ಕಾಡಾನೆಗಳ ಹಿಂಡು ನಿರಂತರ ಧಾಳಿ ನಡೆಸಿ ಬಾರಿ ನಷ್ಟ ಸಂಭವಿಸಿದೆ . ಬಲ್ಲಮಾವಟ್ಟಿ ಗ್ರಾಮ ಪಂಚಾಯತಿಯ ಪೇರೂರು ಗ್ರಾಮದ ನಿವಾಸಿ ಬೊಟ್ಟೋಳಂಡ ರವಿ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ ,ಕಾಫಿ ತೆಂಗು,ಅಡಿಕೆ ಹಣ್ಣಿನ ಗಿಡಗಳನ್ನು ತಿಂದು, ತುಳಿದು ಬಾರಿ ನಷ್ಟ ಮಾಡಿವೆ. ಪೇರೂರು ಗ್ರಾಮ ವ್ಯಾಪ್ತಿಯಲ್ಲಿ ಪದೇಪದೇ ಕಾಡಾನೆಗಳ ಹಿಂಡು ಧಾಳಿ ನಡೆಸುತ್ತಿದ್ದು ರೈತರು ಸಂಕಷ್ಟ ಕ್ಕೊಳಗಾಗಿದ್ದಾರೆ. ಈಗಾಗಲೇ ಈ ಪ್ರದೇಶದಲ್ಲಿ ಪದೇಪದೇ ಕಾಡಾನೆಗಳ ದಾಳಿಯಿಂದ ನಷ್ಟಕ್ಕೊಳಗಾದವರು ಅರಣ್ಯ ಇಲಾಖೆಯನ್ನು ಪರಿಹಾರಕ್ಕೆ ಅರ್ಜಿ ಸಲ್ಲಿಸಿದರು ಪರಿಹಾರ ಇದುವರೆಗೆ ಲಭಿಸಿರುವುದಿಲ್ಲ. ಸಂಕಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗ