ಹತ್ತು ವರ್ಷಗಳ ಹಿಂದೆ ಹತ್ತು ಜನ ಯುವಕರು ಸೇರಿ ಪ್ರಾರಂಭಿಸಿದ ಪರಿಸರ ಸ್ನೇಹಿ ಗಣೇಶ ಸ್ಥಾಪನೆ ಕುರಿತಾದ ಜಾಗೃತಿ ಅಭಿಯಾನ ಇದೀಗ ಮಹತ್ವದ ಫಲ ನೀಡುತ್ತಿದೆ. ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಜನರಿಂದ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ. ಮನೆಗಳಲ್ಲಿ ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿಯೂ ಮಣ್ಣಿನ ಗಣೇಶ ಪ್ರತಿಮೆಗಳನ್ನು ಸ್ಥಾಪಿಸುವ ಅಭ್ಯಾಸ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ಬಾರಿ ಜಿಲ್ಲೆಯಾದ್ಯಂತ ಮಣ್ಣಿನ ಗಣಪತಿಗಳ ಬೇಡಿಕೆ ಗಗನಕ್ಕೇರಿದ್ದು, ಅಂಗಡಿಗಳಲ್ಲಿ ಮಣ್ಣಿನ ವಿಗ್ರಹಗಳಿಗೆ ಭಾರಿ ಬೇಡಿಕೆ ಕಂಡುಬರುತ್ತಿದೆ. ಇನ್ನು ಹತ್ತು ವರ್ಷಗಳಿಂದ ಪ್ರಭು ಸ್ವದೇಶಿ ಹಾಗೂ ತಂಡ ಪರಿಸರ ಹಾನಿ ತಪ್ಪಿಸಲು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗೆ ಬದಲಾಗಿ ಮಣ್ಣಿನ ಗಣಪತ