ಹಾವೇರಿಯ ಭಗವಾನ ೧೦೦೮ ನೇಮಿನಾಥ ದಿಗಂಬರ ಜೈನಮಂದಿರದಲ್ಲಿ ಸೆಪ್ಟೆಂಬರ್ ೭ ರವರೆಗೆ ದಶಲಕ್ಷಣ ಮಹಾಪರ್ವದ ಕಾರ್ಯಕ್ರಮಗಳು ನಡೆಯಲಿವೆ. ಸೆಪ್ಟೆಂಬರ್ ೨ ರಂದು ಉತ್ತಮ ಸಂಯಮ ಧರ್ಮ ಆಚರಣೆ ಅಂಗವಾಗಿ ಬೆಳಿಗ್ಗೆ ೮ ಗಂಟೆಗೆ ಆಚಾರ್ಯ ಪರಮೇಷ್ಢಿ ವಿಧಾನ ಪೂಜೆ ನಡೆಯಲಿದೆ. ಸಂಜೆ ೬ ಗಂಟೆಗೆ ಧಾರ್ಮಿಕ ಸಭೆ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ